ರಾಸಾಯನಿಕ ಹೆಸರು: ಸೋಡಿಯಂ ಹೈಡ್ರೋಜನ್ ಕಾರ್ಬೋನೇಟ್ ರಾಸಾಯನಿಕ ಸೂತ್ರ: NaHCO3 ಆಡುಮಾತಿನಲ್ಲಿ: ಅಡಿಗೆ ಸೋಡ ತಣ್ಣಗಿರುವ ಸೋಡಿಯಂ ಕಾರ್ಬೋನೇಟ್ ( ) ಸಂತೃಪ್ತ ದ್ರಾವಣದ ಮೂಲಕ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹಾಯಿಸುವುದರಿಂದ ಸೋಡಿಯಂ ಬೈ ಕಾರ್ಬೋನೇಟ್ ( ) ದೊರೆಯುತ್ತದೆ. ಸೋಡಿಯಂ ಬೈ ಕಾರ್ಬೋನೇಟ್ ಹರಳುಗಳು ಪ್ರತ್ಯೇಕಗೊಳ್ಳುತ್ತವೆ. Na2CO3 + CO2 + H2O → 2NaHCO3 == ಸೋಡಿಯಂ ಬೈ ಕಾರ್ಬೋನೇಟ್‍ನ ಗುಣಗಳು == ಸೋಡಿಯಂ ಬೈ ಕಾರ್ಬೋನೇಟ್‍ ಒಂದು ಬಿಳಿಯ ಸ್ಪಟಿಕಲವಣವಾಗಿದ್ದು ನೀರಿನಲ್ಲಿ ಕರಗುತ್ತದೆ. ಸೋಡಿಯಂ ಬೈ ಕಾರ್ಬೋನೇಟ್‍ ಅನ್ನು ೧೦೦° (೩೭೩k)ಗಿಂತ ಹೆಚ್ಚು ಕಾಯಿಸಿದರೆ ವಿಭಜನೆ ಹೊಂದಿ ಸೋಡಿಯಂ ಕಾರ್ಬೋನೇಟ್‍ ಉಂಟಾಗುತ್ತದೆ. 2NaHCO3 → Na2CO3 + H2O + CO2↑ ಇದು ಕೊರತೆ ಉಂಟು ಮಾಡದ ಒಂದು ಪ್ರತ್ಯಾಮ್ಲ. ಇದು ಆಮ್ಲಗಳೊಡನೆ ವರ್ತಿಸಿದಾಗ ಇಂಗಾಲದ ಡೈ ಆಕ್ಸೈಡ್ ( ) ಉತ್ಪಾದನೆಯಾಗುತ್ತದೆ. == ಉಪಯೋಗಗಳು == ಸೋಡಿಯಂ ಬೈ ಕಾರ್ಬೋನೇಟ್‍ ಅನ್ನು ಅಡಿಗೆ ಸೋಡದ (ಬೇಕಿಂಗ್ ಪೌಡರ್) ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ದೋಸೆ, ಇಡ್ಲಿ, ಬೋಂಡ ಮುಂತಾದುವುಗಳಿಗೆ ಹಾಕುತ್ತಾರೆ. ಬಿಸಿಯಲ್ಲಿ ಇದು ವಿಭಜಿಸಲ್ಪಟ್ಟು ಇಂಗಾಲಾಮ್ಲ ಉತ್ಪತ್ತಿಯಾಗಿ ಪದಾರ್ಥಗಳನ್ನು ಉಬ್ಬಿಸಿ ಮೃದುವಾಗುವಂತೆ ಗರಿಗರಿಯಾಗುವಂತೆ ಮಾಡುತ್ತದೆ. ಇದನ್ನು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ನಿವಾರಿಸಲು ಔಷಧಿಯಾಗಿ ಬಳಸುತ್ತಾರೆ,ಇದು ಪ್ರತ್ಯಾಮ್ಲಿಯ ಗುಣವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಹೆಚ್ಚಾದ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಸಮಾಧಾನವನ್ನುಂಟು ಮಾಡುತ್ತದೆ. ಇದು ಕ್ಷಾರ ಗುಣವುಳ್ಳದ್ದು. ಆದ್ದರಿಂದ ಕೇಕ್ ಬಿಸ್ಕತ್ ಮುಂತಾದುವನ್ನು ಉಬ್ಬುವಂತೆ ಮಾಡಲು ಉಪಯೋಗಿಸುವ ಬೇಕಿಂಗ್ ಪೌಡರ್‌ನಲ್ಲಿ ಅಡಿಗೆ ಸೋಡ, ಟಾರ್‌ಟಾರಿಕ್ ಆಮ್ಲ ಅಥವಾ ಪೊಟಾಸಿಯಮ್ ಆಸಿಡ್ ಟಾರ್‌ಟರೇಟ್ ಇವುಗಳ ಸೂಕ್ತ ಮಿಶ್ರಣವಿರುತ್ತದೆ. ತೇವದಲ್ಲಿ ಬಿಸಿ ಮಾಡಿದಾಗ ಇವೆರಡರ ರಾಸಾಯನಿಕ ಕ್ರಿಯೆಯಿಂದ ಇಂಗಾಲಾಮ್ಲ ಉತ್ಪತ್ತಿಯಾಗಿ ಒಲೆಯಲ್ಲಿ ಇಟ್ಟ ಕೇಕ್ ಉಬ್ಬುತ್ತದೆ. ಕ್ಷಾರಪದಾರ್ಥ ಆಮ್ಲ ಪದಾರ್ಥದೊಂದಿಗೆ ಬೆರೆಯುವುದರಿಂದ ಬೇಯಿಸಿದ ಕೇಕ್‌ನಲ್ಲಿ ಕ್ಷಾರಗುಣ ಉಳಿಯುವುದಿಲ್ಲ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 1044 2016-11-19 ವೇಬ್ಯಾಕ್ ಮೆಷಿನ್ ನಲ್ಲಿ.